ಕೃಷ್ಣನು ಹೇಳಿದ ಧ್ಯಾನಮಾರ್ಗ #996180

di Dr. King, Swamy Satyapriya

Divine voice publications

(Ancora nessuna recensione) Scrivi una recensione
0,99€

Ascolta l'anteprima

ಭಗವದ್ಗೀತೆ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳಿಗೆ ಅನುವಾದಗೊಂಡಿರುವ ಅತ್ಯಂತ ಪ್ರಸಿದ್ಧ ಕೃತಿ.

ಈ ಪುಸ್ತಕಸರಣಿಯಲ್ಲಿ ನಾನು, ಭಗವದ್ಗೀತೆಯನ್ನು ಮುಖ್ಯವಾಗಿ ಮನೋವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ನೋಡಿದ್ದೇನೆ; ಭಕ್ತಿ ಆಧಾರಿತ ಅಂಶಗಳಿಗೆ ಹೆಚ್ಚು ಒತ್ತು ನೀಡಿಲ್ಲ. ಆದಾಗ್ಯೂ ಆ ದೃಷ್ಟಿಕೋನದಿಂದಲೂ ಭಗವದ್ಗೀತೆ ಬಹಳಷ್ಟು ನೀಡಬಲ್ಲದು ಎಂಬುದು ನನ್ನ ವೈಯಕ್ತಿಕ ನಂಬಿಕೆ.
ಚರ್ಚೆಯಾದ್ಯಂತ, ಸಂಬಂಧಿತ ಶ್ಲೋಕಗಳ ಲಿಪ್ಯಂತರವನ್ನು ಈ ಪುಸ್ತಕದ ebook ಆವೃತ್ತಿಯಲ್ಲಿ ನೀಡಿದ್ದೇನೆ, ಮೂಲದ ಕಾವ್ಯಮಾಧುರ್ಯವನ್ನು ಸವಿಯುವ ಸಲುವಾಗಿ. ಈ ಪುಸ್ತಕದ ಆಡಿಯೋ ಆವೃತ್ತಿಯಲ್ಲಿ ಈ ಶ್ಲೋಕಗಳನ್ನು ಗಾಯನವಾಗಿ ಹಾಡಲಾಗಿದ್ದು, ಕಥನವನ್ನು ನಿಜಕ್ಕೂ ದೈವೀ ಸಂಗೀತಾನುಭವವನ್ನಾಗಿಸುತ್ತದೆ.

ವಾಚಕರ/ಕೇಳುಗರ ಅನುಕೂಲಕ್ಕಾಗಿ ನಾನು ಈ ಚರ್ಚೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದೇನೆ.
ಭಾಗ 1. ಇದು ಭಗವದ್ಗೀತೆಯ ಜ್ಞಾನಮಾರ್ಗವನ್ನು ಕುರಿತಾಗಿದೆ. ಇದರಲ್ಲಿ, ವೈಚಾರಿಕ ರೀತಿಯಲ್ಲಿ ಅಂತಿಮ ಸತ್ಯವನ್ನು ಹೇಗೆ ಕಂಡುಕೊಳ್ಳಬಹುದು ಎಂದು ವಿವರಿಸಲಾಗಿದೆ.
ಭಾಗ 2 (ಪ್ರಸ್ತುತ ಭಾಗ). ಇದು ಭಗವದ್ಗೀತೆಯ ಧ್ಯಾನಮಾರ್ಗವನ್ನು ಕುರಿತಾಗಿದೆ. ಇದರಲ್ಲಿ, ಒಬ್ಬ ವ್ಯಕ್ತಿ, ನಿರಂತರ ಧ್ಯಾನವನ್ನು ಮಾಡುತ್ತಾ ಹೇಗೆ ಅಂತಿಮ ಸತ್ಯವನ್ನು ಕಂಡುಕೊಳ್ಳಬಹುದು ಎಂದು ವಿವರಿಸಲಾಗಿದೆ.
ಭಾಗ 3. ಇದು ಭಗವದ್ಗೀತೆಯ ಕರ್ಮಮಾರ್ಗವನ್ನು ಕುರಿತಾಗಿದೆ. ಒಂದು ನಿರ್ದಿಷ್ಟ ರೀತಿಯಲ್ಲಿ ಕರ್ಮಗಳನ್ನು ಮಾಡುತ್ತಲೂ ಹೇಗೆ ಅಂತಿಮ ಸತ್ಯವನ್ನು ಕಂಡುಕೊಳ್ಳಬಹುದು ಎಂಬುದೇ ಈ ಭಾಗದ ವಿಷಯ.
ಭಾಗ 4. ಇದು ಭಗವದ್ಗೀತೆಯ ಭಕ್ತಿಮಾರ್ಗವನ್ನು ಕುರಿತಾಗಿದೆ. ಹೇಗೆ ಸಾಮಾನ್ಯರೂ ಕೂಡಾ ಯಾವುದೇ ಹೆಚ್ಚು ಪ್ರಯಾಸವಿಲ್ಲದೆ ಅದೇ ಅಂತಿಮ ಸತ್ಯವನ್ನು ಕಂಡುಕೊಳ್ಳುವುದು ಸಾಧ್ಯ, ಎಂಬುದೇ ಈ ಮಾರ್ಗದ ಆಶ್ವಾಸನೆ.
Aggiunta al carrello in corso… L'articolo è stato aggiunto

Con l'acquisto di libri digitali il download è immediato: non ci sono costi di spedizione

Altre informazioni:

ISBN:
9791224730378
Formato:
audiobook
Anno di pubblicazione:
2026
Dimensione:
44.2 MB
Lingua:
Altre lingue
Autori:
Dr. King, Swamy Satyapriya
Anteprima:
Anteprima